ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ಸಭಾಂಗಣ ಈಶಾವಾಸ್ಯ ಪ್ರತಿಷ್ಠಾನ"ವು ಆಯೋಜಿಸಿದ್ದ ಹಿರಿಯರ ನೆನಪು -2021
ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಬಯಲು ಸಭಾಂಗಣದಲ್ಲಿ* "ಈಶಾವಾಸ್ಯ ಪ್ರತಿಷ್ಠಾನ"ವು ಆಯೋಜಿಸಿದ್ದ ಹಿರಿಯರ ನೆನಪು -2021 ಕಾರ್ಯಕ್ರಮವು ಪುತ್ತಿಗೆ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು
ಈ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥವಾಗಿ ಅವರ ಅಪೇಕ್ಷೆ ಇದ್ದಂತೆ ಅವರ ಶಿಷ್ಯರಾದ
ಡಾ. ಶತಾವಧಾನಿ ಉಡುಪಿರಾಮನಾಥ ಆಚಾರ್ಯರಿಗೆ ಹಾಗೂ ಬನ್ನಂಜೆ ಆಚಾರ್ಯರ ಕೊನೆಯ ದಿನಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ವೈದ್ಯರಾದ ಬೆಂಗಳೂರಿನ ಶ್ರೀ ಎಚ್. ಎಸ್. ವೆಂಕಟೇಶ ಅವರಿಗೂ ಸನ್ಮಾನವನ್ನು ಮಾಡಲಾಯಿತು.