|| हरि: सर्वोत्तम वायु: जीवोत्तम ||

NRI students of Puthige Vidyapeetha donated an expensive vehicle for the travel of Sri Sri Suguneendra Theertha Swamiji for his Paryaya

Well furnished expensive. Vehicle donated by NRI students of Puthige Vidyapeetha. The NRI students of Puthige Vidyapeetha of Sri Puthige Matha donated an expensive vehicle for the travel of Sri Sri Suguneendra Theertha Swamiji for his " Paryaya ", on the occasion of his 60th birthday.

 The NRI students had completed their traditional Sanskrit studies at Puthige Vidyapeetha, and are now engaged in religious work and performing rituals in the USA.

ಶ್ರೀಪುತ್ತಿಗೆ ವಿದ್ಯಾರ್ಥಿಗಳಿಂದ ವಾಹನ ಸಮರ್ಪಣೆ* ಉಡುಪಿ ಶ್ರೀಪುತ್ತಿಗೆ ಮಠದ ವಿದೇಶೀ ಶಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳಿಂದ ಶ್ರೀ ಶ್ರೀಗಳವರ ಷಷ್ಟ್ಯಬ್ಧಿ ಪ್ರಯುಕ್ತ ವಿಶೇಷವಾದ, ಸರ್ವಸಜ್ಜಿತವಾದ, ಒಂದು ಕಾಲು ಕೋಟಿ ರೂಪಾಯಿ ವೆಚ್ಚದ ವಾಹನವೊಂದನ್ನು ಇಂದು ಶ್ರೀಗಳಿಗೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಭೀಮನಕಟ್ಟೆ ಮಠಾಧೀಶರಾದ ಕೀರ್ತಿಶೇಷ ಶ್ರೀ ರಘುಮಾನ್ಯತೀರ್ಥರು ನಡೆಸಿದ್ದ ಮೂವತ್ತೆರಡು ಲಕ್ಷ ಲಕ್ಷ್ಮೀನರಸಿಂಹ ಮಂತ್ರಜಪದ ಅಂಗವಾಗಿ ಹೋಮಗಳನ್ನು ಶ್ರೀಪುತ್ತಿಗೆ ನರಸಿಂಹದೇವರ ಸನ್ನಿಧಾನದಲ್ಲಿ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀಪಾದಂಗಳವರು ಮಾತನಾಡಿ, ಹಳೆವಿದ್ಯಾರ್ಥಿಗಳ ಸೇವೆಯನ್ನು ಅಭಿನಂದಿಸುತ್ತಾ, "ಮುಂದಿನ ತಮ್ಮ ನಾಲ್ಕನೇ ಪರ್ಯಾಯದ ನಿಮಿತ್ತವಾಗಿ ನೀಡಿದಂತಹ ವಾಹನವು ಶ್ರೀವಿಠ್ಠಲದೇವರ ರಥೋತ್ಸವದಂತೆ ಆಗಲಿ" ಎಂಬುದಾಗಿ ಹಾರೈಸಿ, ಎಲ್ಲಾ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಶುಭವನ್ನು ಹಾರೈಸಿದರು.