|| हरि: सर्वोत्तम वायु: जीवोत्तम ||

ಕೋಟಿಗೀತಾ ಲೇಖನ ಯಜ್ಞದೀಕ್ಷೆಯ ಅಭಿಯಾನ

"ಕೋಟಿಗೀತಾ ಲೇಖನ ಯಜ್ಞದೀಕ್ಷೆಯ ಅಭಿಯಾನ" ಶ್ರೀ ಪುತ್ತಿಗೆ ಮಠದ  ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು 2024 ಜನೆವರಿ 18 ರಿಂದ ಪ್ರಾರಂಭಗೊಳ್ಳಲಿರುವ  ತಮ್ಮ ನಾಲ್ಕನೆಯ ಶ್ರೀ ಕೃಷ್ಣ ಪೂಜಾ ಪರ್ಯಾಯ ಸಂಭ್ರಮದ ನಿಮಿತ್ತವಾಗಿ   ಶ್ರೀ ಕೃಷ್ಣನ ಮುಖಾರವಿಂದದಿಂದಲೇ  ಹೊರಹೊಮ್ಮಿದ, ವಿಶ್ವ ಶಾಂತಿಯನ್ನ ಸಾರುವ ಅಮೃತಮಯವಾದ ಶ್ರೇಷ್ಠ ಗ್ರಂಥವಾದ ಶ್ರೀಮದ್ ಭಗವದ್ಗೀತಾ ಗ್ರಂಥವನ್ನು  ಪ್ರತಿಯೊಬ್ಬರ ಮೂಲಕ ಬರಿಸುವಂತಹ ಕೋಟಿ ಗೀತಾ ಲೇಖನ ಯಜ್ಞ ಎಂಬುವಂತಹ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.  
 

ಈ ಯೋಜನೆಯ  ಅಭಿಯಾನದ ಚಾಲನೆಯನ್ನು ನಾಳೆ ಅಂದರೆ ದಿನಾಂಕ 25 ಜುಲೈ 2022 ಸೋಮವಾರದಂದು ಮಧ್ಯಾಹ್ನದ ಅಭಿಜಿನ್ ಮುಹೂರ್ತದಲ್ಲಿ  ನೆರವೇರಿಸಲಿದ್ದಾರೆ.  ಕರ್ನಾಟಕ ಪ್ರದೇಶದಲ್ಲಿ  ಐದು ತಂಡಗಳು  ಈ ಅಭಿಯಾನವನ್ನು  ನಡೆಸುತ್ತಾರೆ. ಈ ಮಾರ್ಗದಲ್ಲಿ ಬರುವಂತಹ ಎಲ್ಲ ಊರಿನ ಭಕ್ತರನ್ನು ಸಂಪರ್ಕ ಮಾಡಿ ಇದರಲ್ಲಿ ಭಕ್ತರನ್ನು ನೋಂದಣಿ ಮಾಡುವಂತಹ ಬೃಹತ್ ಯೋಜನೆ ನಾಳೆಯಿಂದ ಪ್ರಾರಂಭವಾಗುತ್ತಿದೆ.

 (1) ಡಾ.ಬಿ.ಗೋಪಾಲಾಚಾರ್ ನೇತೃತ್ವದ ತಂಡ (7892991690) ಉಡುಪಿಯಿಂದ ಮಣಿಪಾಲ ಹಿರಿಯಡ್ಕ ಹೆಬ್ರಿ ತೀರ್ಥಹಳ್ಳಿ ಸಾಗರ ಹೊಸನಗರ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾವೇರಿ ಬಳ್ಳಾರಿ ಹೊಸಪೇಟೆ ಸಿಂಧನೂರು ಮಾರ್ಗವಾಗಿ ರಾಯಚೂರು ನಗರವನ್ನು ತಲುಪುವುದು.  

2. ಶ್ರೀರಮಣ ಆಚಾರ್ಯ ನೇತೃತ್ವದ ತಂಡವು (+918792158946) ಉಡುಪಿಯಿಂದ ಕಾರ್ಕಳ ಬಂಟ್ವಾಳ ಉಪ್ಪಿನಂಗಡಿ ಪುತ್ತೂರು ಸುಳ್ಯ ಮಡಿಕೇರಿ ಕುಶಾಲನಗರ ಮೈಸೂರು ಚಾಮರಾಜನಗರ ನಂಜನಗೂಡು ಟಿ.ನರಸೀಪುರ  ರಾಮನಾಥಪುರ ಹೊಳೆನರಸೀಪುರ ಶ್ರೀರಂಗಪಟ್ಟಣ ಮಾರ್ಗವಾಗಿ ಮಂಡ್ಯ ನಗರವನ್ನು ತಲುಪುವುದು.  

3. ಶ್ರೀಚಂದನ್ ಕಾರಂತ್ ನೇತೃತ್ವದ ತಂಡವು  (+918139804669) ಉಡುಪಿಯಿಂದ ಬ್ರಹ್ಮಾವರ ಕೋಟ ಶಾಲಿಗ್ರಾಮ ಕೋಟೇಶ್ವರ ಕುಂದಾಪುರ ಹೊನ್ನಾವರ ಕುಮಟಾ ಗೋಕರ್ಣ ಕಾರವಾರ ಶಿರಸಿ ಸಿದ್ದಾಪುರ ಹುಬ್ಬಳ್ಳಿ ಧಾರವಾಡ ಕೊಲ್ಹಾಪುರ ಮಾರ್ಗವಾಗಿ ಬೆಳಗಾವಿ ನಗರವನ್ನು ತಲುಪುವುದು.

4. ಶ್ರೀ ಮಹಿತೋಷ ಆಚಾರ್ಯ ನೇತೃತ್ವದ ತಂಡವು  (+919743293652) ಉಡುಪಿಯಿಂದ ಕಟಪಾಡಿ ಪಾಜಕ ಶಿರ್ವ ಮಂಚಿ ನಾರಾವಿ ಉಜಿರೆ ಚಿಕ್ಕಮಗಳೂರು ತುಮಕೂರು ಶಿರ ಅರಸೀಕೆರೆ ಕಡೂರು ಭದ್ರಾವತಿ ಕೊಪ್ಪಳ ಬಾಗಲಕೋಟ ಮಾರ್ಗವಾಗಿ ವಿಜಾಪುರ ನಗರವನ್ನು ತಲುಪುವುದು. 

5. ಶ್ರೀ ಕೆ. ರಮೇಶ್ ಭಟ್ ನೇತೃತ್ವದ ತಂಡವು (9880835626)